ಡಿಸೆಂಬರ್ ೨೪ - ಡಿಸೆಂಬರ್ ತಿಂಗಳಿನ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೮ ನೇ (ಅಧಿಕ ವರ್ಷದಲ್ಲಿ ೩೫೯ ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೬೫ - ಅಮೇರಿಕ ದೇಶದಲ್ಲಿ ಹಿಂಸಾತ್ಮಕ ವರ್ಣಬೇಧ ಪ್ರೋತ್ಸಾಹಕ ಸಂಘಟನೆ ಕು ಕ್ಲುಕ್ಸ್ ಕ್ಲಾನ್ ಸ್ಥಾಪನೆ. ೧೯೨೪ - ಅಲ್ಬೇನಿಯ ಗಣರಾಜ್ಯವಾಯಿತು. ೧೯೫೧ - ಲಿಬ್ಯಾ ಇಟಲಿಯಿಂದ ಸ್ವಾತಂತ್ರ್ಯ ಪಡೆಯಿತು. ೧೯೫೪ - ಲಾಓಸ್ ಸ್ವಾತಂತ್ರ್ಯ ಪಡೆಯಿತು. ೧೯೬೮ - ಅಪೊಲೊ ಕಾರ್ಯಕ್ರಮದ ಅಪೊಲೊ-೮ರ ಅಂತರಿಕ್ಷಯಾನಿಗಳು ಚಂದ್ರನ ಕಕ್ಷೆಯನ್ನು ಹೊಕ್ಕಿದ ಮೊದಲ ಮಾನವರಾದರು. ೧೯೭೯ - ಸೋವಿಯೆಟ್ ಒಕ್ಕೂಟ ಆಫ್ಘಾನಿಸ್ಥಾನದ ಎಡಪಂಥೀಯ ಸರ್ಕಾರವನ್ನು ಬೆಂಬಲಿಸಲು ತನ್ನ ಸೇನೆಯನ್ನು ಕಳುಹಿಸಿತು. ೨೦೦೨ - ನವ ದೆಹಲಿಯ ಆಂತರಿಕ ರೈಲು ಸೇವೆ (ಮೆಟ್ರೊ) ಪ್ರಾರಂಭ. == ಜನನ == ೧೮೧೮ - ಜೇಮ್ಸ್ ಜೂಲ್, ಬ್ರಿಟನ್ನ ಭೌತಶಾಸ್ತ್ರಜ್ಞ. ೧೮೯೧ - ಚಂದ್ರ ಸಿಂಗ್ ಗಢವಾಲಿ, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ೧೮೯೮ - ಎಸ್.ವಿ.ರಂಗಣ್ಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ೧೯೦೫ - ಹೊವರ್ಡ್ ಹ್ಯೂಜ್ಸ್, ಅಮೇರಿಕ ದೇಶದ ಉದ್ಯಮಿ. ೧೯೧೦ - ಪಿ. ಬಿ. ದೇಸಾಯಿ, ಸಂಶೋಧನಕಾರ ಮತ್ತು ಶಾಸನತಜ್ಞ ೧೯೨೫ - ಮೊಹಮದ್ ರಫಿ, ಭಾರತದ ಹಿನ್ನೆಲೆ ಗಾಯಕ. ೧೯೩೧ - ಎಸ್.ವಿ.ಶ್ರೀನಿವಾಸರಾವ್, ಕನ್ನಡ ಕಥೆ ಮತ್ತು ಕಾದಂಬರಿಕಾರ ೧೯೫೯ - ಅನಿಲ್ ಕಪೂರ್, ಬಾಲಿವುಡ್ ನಟ. == ಮರಣ == ೧೫೨೪ - ವಾಸ್ಕೊ ಡ ಗಾಮ, ಪೋರ್ಚುಗಲ್ನ ನಾವಿಕ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ